ಡಬ್ಬಿಂಗ್ ಮುಗಿಸಿದ ‘ಆರಂಭ
Posted date: 20 Thu, Nov 2014 – 06:29:29 AM

ಎಸ್.ಅಭಿ ಹನಕೆರೆ ನಿರ್ದೇಶನದ ‘ಆರಂಭ ಚಿತ್ರ ಡಬ್ಬಿಂಗ್ ಹಂತ ಮುಗಿಸಿ, ಮುಂದಿನ ಹಂತಕ್ಕೆ ಸಜ್ಜಾಗಿದೆ. ಶರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಿ.ಗಣೇಶ್.ವಿ.ನಾಗೇನಹಳ್ಳಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪಾಂಡುಕುಮಾರ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.
ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಊರಾದ ಕಣಗಾಲ್‌ನಲ್ಲಿ ಈ ಚಿತ್ರದ ಚಿತ್ರೀಕರಣ ನದೆದಿದೆ. ಈ ಚಿತ್ರದ ಪ್ರೀಮಿಯರ್ ಶೋನ್ನು ಕಣಗಾಲ್‌ನಲ್ಲಿ ಆಯೋಜಿಸಿ ಚಿತ್ರರಂಗದ ಗಣ್ಯರನ್ನು ಆಹ್ವಾನಿಸುವ ಯೋಜನೆ ಹಾಕಿಕೊಂಡಿರುವುದಾಗಿ ತಿಳಿಸಿರುವ ನಿರ್ದೇಶಕ ಅಭಿ ಹನಕೆರೆ ಕಣಗಾಲ್‌ನಲ್ಲಿ ಚಿತ್ರೀಕರಿಸಿರುವ ಮೊದಲ ಕನ್ನಡ ಚಿತ್ರ ‘ಆರಂಭ ಎನ್ನುತ್ತಾರೆ.
ಗುರುಕಿರಣ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಗುರುಕಿರಣ್, ಗೋಟುರಿ, ಕವಿರಾಜ್, ಅಭಿ ಹನಕೆರೆ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ನಾಗರಾಜ್ ಛಾಯಾಗ್ರಹಣ, ಗಿರೀಶ್ ಸಂಕಲನ ಹಾಗೂ ಸಂದೀಪ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಕಾಶ್ ಮಧುಗಿರಿ ಅವರ ಪುತ್ರ ಮಿಥುನ್ ಪ್ರಕಾಶ್ ಈ ಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ರಸಗವಳ ನಾರಾಯಣ್, ಅಭಿರಾಮಿ, ಬೇಬಿ ಹಾಸಿನಿ, ಡಿಸ್ಕೋ ಪೃಥ್ವಿ, ರಾಘವೇಂದ್ರ ಪ್ರವೀಣ್, ಬ್ಯಾಂಕ್ ಜನಾರ್ದನ್, ಪಾಂಡುಕುಮಾರ್, ಅಭಿರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed